Thursday, October 27, 2016

ಕಫ ಇರುವ ಕೆಮ್ಮು ಹೆಚ್ಚಾದಾಗ ಇದನ್ನು ಮಾಡಿ :

Image result for cough

ಕೆಲವಡೆ ಜೋರಾದ ಮಳೆ, ಮತ್ತೆ ಕೆಲವಡೆ ಮೋಡ ಮುಸುಕಿದ ವಾತಾವರಣ. ಇದರಿಂದಾಗಿ ಕೆಮ್ಮು ಹೆಚ್ಚಾಗಿ ಕಂಡು ಬರುತ್ತಿದೆ.  ಇದು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಸುಲಭವಾಗಿ ಮನೆಯವರಿಗೆಲ್ಲಾ ಶೀತ, ಕೆಮ್ಮು ತಲೆನೋವಿನ ಸಮಸ್ಯೆ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ.  ಈ ಕೆಳಗೆ ತಿಳಿಸಿರುವ ಮನೆಮದ್ದುಗಳನ್ನು ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನೀರು ಹಾಗೂ ಉಪ್ಪು :
Image result for salt and water images

ಬಿಸಿನೀರಿನಲ್ಲಿ ಉಪ್ಪನ್ನು ಕರಗಿಸಿ ಬಾಯನ್ನು ದಿನಕ್ಕೆ ಎರಡು ಅಥವಾ  ಮೂರು  ಬಾರಿ ಮುಕ್ಕಳಿಸುವುದರಿಂದ ಕಫ ಇರುವ ಕೆಮ್ಮನ್ನು ನಿವಾರಿಸಿಕೊಳ್ಳಬಹುದು.  ಹಾಗಾಗಿ ಇದು ಬಹಳ ಉಪಯೋಗಕಾರಿಯಾಗಿದೆ.

ಕಲ್ಲುಸಕ್ಕರೆ ತಿನ್ನಿರಿ:
Image result for stone sugar

ದಿನನಿತ್ಯ ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತಿರುವುದರಿಂದ ಕೂಡ ಕಫ ಇರುವ ಕೆಮ್ಮನ್ನು ಹೋಗಲಾಡಿಸಬಹುದು.

ತುಳಸಿ :
Image result for tulsi

ತುಳಸಿ ಎಲೆಯನ್ನು ಆಗ್ಗಾಗ್ಗೆ  ಬಾಯಲ್ಲಿಟ್ಟುಕೊಂಡು ಜಗಿಯುವುದರಿಂದ ಕೆಮ್ಮಣ್ಣು ಆದಷ್ಟು ಬೇಗನೆ ಓಡಿಸಬಹುದಾಗಿದೆ.  ಇದು ಶೀತವನ್ನು ಕೂಡ ಹೋಗಲಾಡಿಸುವ ಗುಣವನ್ನು ಹೊಂದಿದೆ.

ದೊಡ್ಡ ಪತ್ರೆ :
Home remedies for cough and Cold in Children

ಒಂದು ಪಾತ್ರೆಯಲ್ಲಿ ನೀರು, ದೊಡ್ಡಪತ್ರೆ, ಶುಂಠಿ, ಅಜ್ವಾನ ಹಾಗೂ  ಕಾಳುಮೆಣಸನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಕಫ ಸಹಿತ ಕೆಮ್ಮನ್ನು ವಾಸಿ ಮಾಡಬಹುದಾಗಿದೆ.

ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು :
Image result for raw garlic pepper

ಒಂದು ಪಾತ್ರೆಗೆ ನೀರು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಇದೆಲ್ಲವನ್ನು ಜಜ್ಜಿ ಹಾಕಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಕುದಿಸಿದ ಕಷಾಯವನ್ನು ಕುಡಿಯುವುದರಿಂದ ಕಫಸಹಿತ ಕೆಮ್ಮನ್ನು ಮಾಯವಾಗಿಸಬಹುದು.  ಅಲ್ಲದೆ ಹೀಗೆ ತಯಾರಿಸಿದ ಕಷಾಯದಿಂದ ಹಬೆಯನ್ನು ತೆಗೆದುಕೊಂಡರೆ ಶೀತ ಹಾಗೂ ಗಂಟಲು ನೋವನ್ನು ಕೂಡ ಆದಷ್ಟು ಬೇಗನೆ ಹೋಗಲಾಡಿಸಬಹುದಾಗಿದೆ.

ಈರುಳ್ಳಿ :
Image result for onion remedy for cough

ಹಸಿ ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಅದನ್ನು ನೆನೆಯಲು ಬಿಟ್ಟು ಸೇವಿಸುವುದರಿಂದ ಕೆಮ್ಮನ್ನು ವಾಸಿ ಮಾಡಬಹುದಾಗಿದೆ.

ಅರಿಶಿನ :
Image result for turmeric for cough

ಒಂದು ಸ್ಪೂನ್ ಅರಿಶಿನಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.
ಅರಿಶಿನವು ಆಂಟಿಸೆಪ್ಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ.   ಅರಶಿನವನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು.

ನಿಂಬೆ :
Image result for lemon for cough

ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ನಿಂಬೆ ರಸ ಹಾಗೂ ಒಂದು ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಶ್ರ ಮಾಡಿ ಸೇವಿಸುವುದರಿಂದ ಕೆಮ್ಮು ಬಹುಬೇಗನೆ ಮಾಯವಾಗುತ್ತದೆ.

ಒಣಕೆಮ್ಮು(ಕಫ ರಹಿತ ಕೆಮ್ಮು) ನಿವಾರಣೆ :

Image result for dry cough images

ಚಳಿ ಮತ್ತು ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ.  ಧೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ. ಒಣ ಕೆಮ್ಮು ಕಾಣಿಸಿದರೆ ಕಫ ಸಮಸ್ಯೆ ಇರುವುದಿಲ್ಲ, ಆದರೆ ಗಂಟಲಿನಲ್ಲಿ ಕೆರೆತ ಮತ್ತು ನಿರಂತರ ಕೆಮ್ಮು ಕಂಡು ಬರುವುದು, ಕೆಲವರಿಗೆ 2 ತಿಂಗಳವರೆಗೆ ಈ ರೀತಿಯ ಕೆಮ್ಮು ಕಂಡು ಬರುವುದು.
ಇಂತವರು ದೂಳಿನಿಂದ ದೂರವಿರುವುದರ ಮುಖಾಂತರ ಹಾಗೂ ಕೆಲ ಮನೆ ಮದ್ದುಗಳನ್ನು ಪಾಲಿಸುವುದರಿಂದ ಒಣ ಕೆಮ್ಮು ಬರದಂತೆ ತಡೆಯಬಹುದು. ಒಣಕೆಮ್ಮನ್ನು ತಡೆಯುವ ಸರಳವಾದ ಮನೆ ಮದ್ದುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.   

ಬಹುಮುಖ್ಯ ನೀರು:
Image result for drinking water images


ಮೊತ್ತಮೊದಲನೆಯದಾಗಿ  ದಿನನಿತ್ಯ  ಗಂಡಸರು ಮೂರು ಲೀಟರ್ ಹಾಗೂ ಹೆಂಗಸರು ಎರಡು ಲೀಟರ್ ನೀರು ಕುಡಿಯುವುದು ಅತ್ಯಗತ್ಯ.  ಹಾಗಾಗಿ ಒಣ ಕೆಮ್ಮು ಕಾಣಿಸಿದಾಗ ಆಗಾಗ ಸ್ವಲ್ಪ-ಸ್ವಲ್ಪ ನೀರು ಕುಡಿಯಿರಿ. ಹೀಗೆ ಮಾಡಿದರೆ ಕೆಮ್ಮು ಬರುವುದನ್ನು ತಡೆಯಬಹುದು. ಗಂಟಲು ಒಣಗಲು ಬಿಡಬೇಡಿ. ಆಗಾಗ ನೀರನ್ನು ಕುಡಿಯುತ್ತಿದ್ದರೆ ಕ್ರಮೇಣ ಒಣ ಕೆಮ್ಮು ಕಮ್ಮಿಯಾಗುವುದು. 

ಉಪ್ಪು :
Image result for salt images

ಒಂದು  ಗ್ಲಾಸ್ಸಿನಲ್ಲಿ  ಬಿಸಿನೀರನ್ನು ಹಾಕಿ ಅದರಲ್ಲಿ ಉಪ್ಪನ್ನು ಕರಗಿಸಿ  ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಬಾಯನ್ನು ಮುಕ್ಕಳಿಸುವುದರಿಂದ ಒಣಕೆಮ್ಮನ್ನು ತ್ವರಿತವಾಗಿ ನಿವಾರಿಸಬಹುದು.  ಒಣಕೆಮ್ಮಿಗೆ ಇದು ಉತ್ತಮವಾದ ಪರಿಹಾರವಾಗಿದೆ.

ಶುಂಠಿ, ನಿಂಬೆ ಹಾಗೂ ಜೇನುತುಪ್ಪ :
Image result for ginger and honey for cough

ಶುಂಠಿ ಕಷಾಯಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಒಣ ಕೆಮ್ಮನ್ನು ನಿವಾರಿಸಬಹುದು.

ಕಾಳುಮೆಣಸು ಮತ್ತು ಹರಳುಪ್ಪು :
Image result for pepper images

ಕಾಳುಮೆಣಸಿಗೆ ಹರಳುಪ್ಪು ಸೇರಿಸಿ ಅಗಿದು ನುಂಗುವುದರಿಂದ ಒಣಕೆಮ್ಮನ್ನು ಬಹುಬೇಗನೆ ಹೋಗಲಾಡಿಸಬಹುದು.

ಚಕ್ಕೆ :

Image result for cinnamon images

ಚಕ್ಕೆಯನ್ನು ನೀರಿನಲ್ಲಿ ನೆನೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಒಣ ಕೆಮ್ಮು ಕಡಿಮೆಯಾಗುವುದು.

ಕಲ್ಲುಸಕ್ಕರೆ :
Image result for stone sugar images

ಆಗ್ಗಾಗ್ಗೆ ಕಲ್ಲುಸಕ್ಕರೆಯನ್ನು ಚೀಪುತ್ತಿರುವುದರಿಂದ ಒಣಕೆಮ್ಮನ್ನು ಹೋಗಲಾಡಿಸಬಹುದು.  ಒಣಕೆಮ್ಮು ಇದ್ದಾಗ ಕಲ್ಲುಸಕ್ಕರೆಯನ್ನು ಬಾಯಲ್ಲಿ ಇಟ್ಟುಕೊಂಡಿರಿ ಇದರನ್ನು ಬೇಗನೆ ಒಣಕೆಮ್ಮು ಹಾಗೂ ಗಂಟಲು ಕೆರೆತವನ್ನು ತಡೆಯಬಹುದು.

ವೀಳ್ಯದೆಲೆ ಸೇವನೆ :
 Image result for villedele in english

ಊಟದ ನಂತರ ವೀಳ್ಯದೆಲೆಯನ್ನು ಜಗಿಯುವುದರಿಂದ ಕೆಮ್ಮಿನಿಂದ ನಿದ್ರೆಗೆ ತೊಂದರೆಯಾಗುವುದನ್ನು ತಪ್ಪಿಸುತ್ತದೆ ಹಾಗೂ ಕೆಮ್ಮಿನ ನಿವಾರಣೆಗೆ ಸಹಾಯಕವಾದ ಮದ್ದಾಗಿದೆ.