ಚಳಿ ಮತ್ತು ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಧೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ. ಒಣ ಕೆಮ್ಮು ಕಾಣಿಸಿದರೆ ಕಫ ಸಮಸ್ಯೆ ಇರುವುದಿಲ್ಲ, ಆದರೆ ಗಂಟಲಿನಲ್ಲಿ ಕೆರೆತ ಮತ್ತು ನಿರಂತರ ಕೆಮ್ಮು ಕಂಡು ಬರುವುದು, ಕೆಲವರಿಗೆ 2 ತಿಂಗಳವರೆಗೆ ಈ ರೀತಿಯ ಕೆಮ್ಮು ಕಂಡು ಬರುವುದು.
ಇಂತವರು ದೂಳಿನಿಂದ ದೂರವಿರುವುದರ ಮುಖಾಂತರ ಹಾಗೂ ಕೆಲ ಮನೆ ಮದ್ದುಗಳನ್ನು ಪಾಲಿಸುವುದರಿಂದ ಒಣ ಕೆಮ್ಮು ಬರದಂತೆ ತಡೆಯಬಹುದು. ಒಣಕೆಮ್ಮನ್ನು ತಡೆಯುವ ಸರಳವಾದ ಮನೆ ಮದ್ದುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.
ಇಂತವರು ದೂಳಿನಿಂದ ದೂರವಿರುವುದರ ಮುಖಾಂತರ ಹಾಗೂ ಕೆಲ ಮನೆ ಮದ್ದುಗಳನ್ನು ಪಾಲಿಸುವುದರಿಂದ ಒಣ ಕೆಮ್ಮು ಬರದಂತೆ ತಡೆಯಬಹುದು. ಒಣಕೆಮ್ಮನ್ನು ತಡೆಯುವ ಸರಳವಾದ ಮನೆ ಮದ್ದುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.
ಬಹುಮುಖ್ಯ ನೀರು:
ಮೊತ್ತಮೊದಲನೆಯದಾಗಿ ದಿನನಿತ್ಯ ಗಂಡಸರು ಮೂರು ಲೀಟರ್ ಹಾಗೂ ಹೆಂಗಸರು ಎರಡು ಲೀಟರ್ ನೀರು ಕುಡಿಯುವುದು ಅತ್ಯಗತ್ಯ. ಹಾಗಾಗಿ ಒಣ ಕೆಮ್ಮು ಕಾಣಿಸಿದಾಗ ಆಗಾಗ ಸ್ವಲ್ಪ-ಸ್ವಲ್ಪ ನೀರು ಕುಡಿಯಿರಿ. ಹೀಗೆ ಮಾಡಿದರೆ ಕೆಮ್ಮು ಬರುವುದನ್ನು ತಡೆಯಬಹುದು. ಗಂಟಲು ಒಣಗಲು ಬಿಡಬೇಡಿ. ಆಗಾಗ ನೀರನ್ನು ಕುಡಿಯುತ್ತಿದ್ದರೆ ಕ್ರಮೇಣ ಒಣ ಕೆಮ್ಮು ಕಮ್ಮಿಯಾಗುವುದು.
ಉಪ್ಪು :
ಒಂದು ಗ್ಲಾಸ್ಸಿನಲ್ಲಿ ಬಿಸಿನೀರನ್ನು ಹಾಕಿ ಅದರಲ್ಲಿ ಉಪ್ಪನ್ನು ಕರಗಿಸಿ ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಬಾಯನ್ನು ಮುಕ್ಕಳಿಸುವುದರಿಂದ ಒಣಕೆಮ್ಮನ್ನು ತ್ವರಿತವಾಗಿ ನಿವಾರಿಸಬಹುದು. ಒಣಕೆಮ್ಮಿಗೆ ಇದು ಉತ್ತಮವಾದ ಪರಿಹಾರವಾಗಿದೆ.
ಶುಂಠಿ, ನಿಂಬೆ ಹಾಗೂ ಜೇನುತುಪ್ಪ :
ಶುಂಠಿ ಕಷಾಯಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಒಣ ಕೆಮ್ಮನ್ನು ನಿವಾರಿಸಬಹುದು.
ಕಾಳುಮೆಣಸು ಮತ್ತು ಹರಳುಪ್ಪು :
ಕಾಳುಮೆಣಸಿಗೆ ಹರಳುಪ್ಪು ಸೇರಿಸಿ ಅಗಿದು ನುಂಗುವುದರಿಂದ ಒಣಕೆಮ್ಮನ್ನು ಬಹುಬೇಗನೆ ಹೋಗಲಾಡಿಸಬಹುದು.
ಚಕ್ಕೆ :
ಚಕ್ಕೆಯನ್ನು ನೀರಿನಲ್ಲಿ ನೆನೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಒಣ ಕೆಮ್ಮು ಕಡಿಮೆಯಾಗುವುದು.
ಕಲ್ಲುಸಕ್ಕರೆ :
ಆಗ್ಗಾಗ್ಗೆ ಕಲ್ಲುಸಕ್ಕರೆಯನ್ನು ಚೀಪುತ್ತಿರುವುದರಿಂದ ಒಣಕೆಮ್ಮನ್ನು ಹೋಗಲಾಡಿಸಬಹುದು. ಒಣಕೆಮ್ಮು ಇದ್ದಾಗ ಕಲ್ಲುಸಕ್ಕರೆಯನ್ನು ಬಾಯಲ್ಲಿ ಇಟ್ಟುಕೊಂಡಿರಿ ಇದರನ್ನು ಬೇಗನೆ ಒಣಕೆಮ್ಮು ಹಾಗೂ ಗಂಟಲು ಕೆರೆತವನ್ನು ತಡೆಯಬಹುದು.
ವೀಳ್ಯದೆಲೆ ಸೇವನೆ :
ಊಟದ ನಂತರ ವೀಳ್ಯದೆಲೆಯನ್ನು ಜಗಿಯುವುದರಿಂದ ಕೆಮ್ಮಿನಿಂದ ನಿದ್ರೆಗೆ ತೊಂದರೆಯಾಗುವುದನ್ನು ತಪ್ಪಿಸುತ್ತದೆ ಹಾಗೂ ಕೆಮ್ಮಿನ ನಿವಾರಣೆಗೆ ಸಹಾಯಕವಾದ ಮದ್ದಾಗಿದೆ.
No comments:
Post a Comment